The quality of reviews for Kannada films in newspapers is abysmal. They say the same things week after week - doing unfunny puns, saying politically correct things and making sure no new perspective is offered even by accident. Here is my mock review of "Kill Bill 2" using the same 'template'! ಈ ವಾರ ಬಿಡುಗಡೆಯಾಗಿರುವ ಚಿತ್ರ 'ಕಿಲ್ ಬಿಲ್ 2' ಒಂದು ಉತ್ತಮ ಪ್ರಯತ್ನ. ಕಲಾತ್ಮಕ ಅಂಶಗಳನ್ನು ಇಟ್ಟುಕೊಂಡೇ ಒಂದು ಮನರಂಜನಾತ್ಮಕ ಮಾಸ್ ಚಿತ್ರ ಕೊಡಬಹುದೆಂಬುದಕ್ಕೆ ಇದು ಒಳ್ಳೆಯ ಉದಾಹರಣೆ. ನಮ್ಮ ಹಾಲಿವುಡ್ ಯಾವ ಸ್ಯಾಂಡಲ್‌ವುಡ್ ಗೂ ಕಮ್ಮಿ ಎನ್ನುವಷ್ಟು ರಿಚ್ ಆಗಿ ಚಿತ್ರ ಮೂಡಿ ಬಂದಿದೆ, ಇಷ್ಟು ಆದ್ಧೂರಿಯಾಗಿ ಚಿತ್ರ ಬಂದಿರುವುದಕ್ಕೆ ನಿರ್ಮಾಪಕರನ್ನು ಅಭಿನಂದಿಸಲೇ ಬೇಕು. ಕಥೆ ತುಂಬಾ ಸಾಧಾರಣ. ನಾಯಕಿಯನ್ನು ಕೊಲ್ಲಲು ಅವಳ ಗುಂಪಿನವರು ವಿಫಲರಾಗುತ್ತಾರೆ. ಅವರೆಲ್ಲರ ಮೇಲೆ ಆಕೆ ಸೇಡು ತೀರಿಸಿಕೊಳ್ಳುವುದೇ ಕಥೆಯ ತಿರುಳು. ನಿರ್ದೇಶಕ ಟಾರನ್‌ಟೀನೊ ಬಹಳ ಜಾಣ್ಮೆಯಿಂದ ಈ ಸೇಡಿನ ಕಥಾನಕವನ್ನು ಹೆಣೆದಿದ್ದಾರೆ. ಚ್ಯಾಪ್ಟರ್ಸ್ ಮೂಲಕ ನಿರೂಪಿಸುವ ರೀತಿ ನಿಮಗೆ ಶಾಲೆಯ ನೆನೆಪು ತರಿಸದಿದ್ದರೆ ಕೇಳಿ! ಮೊದಲ ದೃಶ್ಯದಿಂದ ಕೊನೆಯವರೆಗೂ ನಿಮ್ಮನ್ನು ಬಿಗಿಯಾಗಿ ಹಿಡಿದಿಟ್ಟುಕೊಳುತ್ತದೆ, ಸಲೀಸಾಗಿ ನೋಡಿಸಿಕೊಂಡು ಹೋಗುತ್ತದೆ. ಇಡೀ ತಂಡದಿಂದ ನಿರ...
If it made sense to you, remember, it was actually not meant to!