Skip to main content

Kill Bill 2 - Mock Review - Sandalwood ishtyle

The quality of reviews for Kannada films in newspapers is abysmal. They say the same things week after week - doing unfunny puns, saying politically correct things and making sure no new perspective is offered even by accident. Here is my mock review of "Kill Bill 2" using the same 'template'!



ಈ ವಾರ ಬಿಡುಗಡೆಯಾಗಿರುವ ಚಿತ್ರ 'ಕಿಲ್ ಬಿಲ್ 2' ಒಂದು ಉತ್ತಮ ಪ್ರಯತ್ನ. ಕಲಾತ್ಮಕ ಅಂಶಗಳನ್ನು ಇಟ್ಟುಕೊಂಡೇ ಒಂದು ಮನರಂಜನಾತ್ಮಕ ಮಾಸ್ ಚಿತ್ರ ಕೊಡಬಹುದೆಂಬುದಕ್ಕೆ ಇದು ಒಳ್ಳೆಯ ಉದಾಹರಣೆ. ನಮ್ಮ ಹಾಲಿವುಡ್ ಯಾವ ಸ್ಯಾಂಡಲ್‌ವುಡ್ ಗೂ ಕಮ್ಮಿ ಎನ್ನುವಷ್ಟು ರಿಚ್ ಆಗಿ ಚಿತ್ರ ಮೂಡಿ ಬಂದಿದೆ, ಇಷ್ಟು ಆದ್ಧೂರಿಯಾಗಿ ಚಿತ್ರ ಬಂದಿರುವುದಕ್ಕೆ ನಿರ್ಮಾಪಕರನ್ನು ಅಭಿನಂದಿಸಲೇ ಬೇಕು.

ಕಥೆ ತುಂಬಾ ಸಾಧಾರಣ. ನಾಯಕಿಯನ್ನು ಕೊಲ್ಲಲು ಅವಳ ಗುಂಪಿನವರು ವಿಫಲರಾಗುತ್ತಾರೆ. ಅವರೆಲ್ಲರ ಮೇಲೆ ಆಕೆ ಸೇಡು ತೀರಿಸಿಕೊಳ್ಳುವುದೇ ಕಥೆಯ ತಿರುಳು. ನಿರ್ದೇಶಕ ಟಾರನ್‌ಟೀನೊ ಬಹಳ ಜಾಣ್ಮೆಯಿಂದ ಈ ಸೇಡಿನ ಕಥಾನಕವನ್ನು ಹೆಣೆದಿದ್ದಾರೆ. ಚ್ಯಾಪ್ಟರ್ಸ್ ಮೂಲಕ ನಿರೂಪಿಸುವ ರೀತಿ ನಿಮಗೆ ಶಾಲೆಯ ನೆನೆಪು ತರಿಸದಿದ್ದರೆ ಕೇಳಿ! ಮೊದಲ ದೃಶ್ಯದಿಂದ ಕೊನೆಯವರೆಗೂ ನಿಮ್ಮನ್ನು ಬಿಗಿಯಾಗಿ ಹಿಡಿದಿಟ್ಟುಕೊಳುತ್ತದೆ, ಸಲೀಸಾಗಿ ನೋಡಿಸಿಕೊಂಡು ಹೋಗುತ್ತದೆ. ಇಡೀ ತಂಡದಿಂದ ನಿರ್ದೇಶಕರು ಒಳ್ಳೇ ಕೆಲಸವನ್ನು ತೆಗೆಸಿದ್ದಾರೆ.

ನಾಯಕಿಯಾಗಿ ಉಮಾ ತುರಿಮಣೆ ಅಭಿನಯ ವಾಹ್ ವಾಹ್. ಕೆಲವು ಸಲ ನಮ್ಮ ಮಾಲಾಶ್ರೀ ನೆನಪಿಗೆ ಬಂದರೂ ಬರಬಹುದು. ಆ ಮೈಕಟ್ಟು, ಆ ಅಂಗಸೌಷ್ಟವ, ಅಭಿನಯದಲ್ಲಿ ಚತುರತೆ ಆಕೆಯ ಪ್ರಬುದ್ಧತೆಯನ್ನು ಸಾರುತ್ತದೆ, ಆಕೆಯೇ ಚಿತ್ರದ ಜೀವಾಳ. ಪಲ್ಪ್ ಫಿಕ್ಶನ್ ಅಲ್ಲಿ ಕುಣಿದು ಕುಪ್ಪಳಿಸಿ ನಮ್ಮ ಮನಸ್ಸು ಸೂರೆಗೊಂಡಿದ್ದ ಉಮಾ ತಾನು ಕುಣಿತಕ್ಕೂ ಸೈ ಹೊಡೆದಾಟಕ್ಕೂ ಸೈ ಎಂದು ನಿರೂಪಿಸಿದ್ದಾರೆ. ಆಕೆಯ ಫೈವ್-ಪಾಯಂಟ್ ಪಾಮ್ ಟೆಕ್ನೀಕ್ ಫೈಟ್ ಬಂದಾಗಲಂತೂ ಚಿತ್ರಮಂದಿರದ ತುಂಬಾ ಶಿಳ್ಳೆ, ಚಪ್ಪಾಳೆ, ಕೇಕೆ. ಹಿರಿಯ ನಟ ಬಿಲ್ ಕರಡೀನೆ ತೂಕದ ಅಭಿನಯ ನೀಡಿದ್ದಾರೆ. ಅವರ ಡೈಲಾಗ್ ಪ್ರೇಕ್ಷಕರ ಪಾಲಿಗೆ ಪಂಚಾಮೃತ. ಎಲ್ ಡ್ರೈವರ್ ಪಾತ್ರದಲ್ಲಿ ಡೇರೈಲ್ ಹ್ಯಾನ ಪಡ್ಡೆಗಳ ನಿದ್ದೆ ಕೆಡಿಸುತ್ತರೆ. ಗ್ಲ್ಯಾಮರ್ ಅಲ್ಲಿ ನಮ್ಮ ಪಂಕಜ ಪದುಮರನ್ನು ಮೀರಿಸಿದರೂ, ಅಭಿನಯದಲ್ಲಿ ಪಳಗಬೇಕಿದೆ, ಹಾಗಾದರೆ ನಮ್ಮ ಚಿತ್ರರಂಗಕ್ಕೆ ಒಳ್ಳೇ ಪ್ರತಿಭೆ ಸಿಕ್ಕಂತೆ.

ಪೋಷಕ ಪಾತ್ರದಲ್ಲಿ ಮೈಕಲ್ ಮ್ಯಾಡಿಸನ್, ಗೋರ್ಡನ್ ಲಿಯೂ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ, ಕೊಟ್ಟ ಕಾಸಿಗೆ ಮೋಸ ಇಲ್ಲ. ಚಿತ್ರ ತಾಂತ್ರಿಕವಾಗಿಯೂ ಚನ್ನಾಗಿ ಮೂಡಿ ಬಂದಿದೆ. ಎರಡು ಹಾಡುಗಳು ಕೇಳುವಂತಿವೆ. ಛಾಯಾಗ್ರಹಣ ಕಣ್ಣಿಗೆ ಹಬ್ಬ - ಚೀನಾ, ಸೆಂಟ್ರಲ್ ಅಮೇರಿಕ ಅನ್ನು ಸೆರೆಹಿಡಿದಿರುವ ರೀತಿ ಹ್ಯಾಟ್ಸ್ ಆಫ್. ಮೊದಲಾರ್ಧದಲ್ಲಿ ಇರುವ ವೇಗ ಆಮೇಲೆ ಮಾಯವಾಗಿದೆ, ಸಂಕಲನಕಾರರು ಕತ್ತರಿಯನ್ನು ಇನ್ನೂ ಚನ್ನಾಗಿ ಬಳಸಬಹುದಿತ್ತು. ಆಕ್ಶನ್ ಚಿತ್ರ ಆದರೂ ಹಿಂಸೆ ಸ್ವಲ್ಪ ಜಾಸ್ತಿ ಆಯಿತೇನೋ ಅನ್ನಿಸದಿರದು. ಹೆಂಗಸರು ಮಕ್ಕಳಿಗೆ ಚಿತ್ರ ಇಷ್ಟವಾಗುತ್ತಾ ಗೊತ್ತಿಲ್ಲ. ಆದರೆ ಗೆಳೆಯರ ಜೊತೆ ಒಮ್ಮೆ ನೋಡಿ ಬರಲು ಅಡ್ಡಿ ಇಲ್ಲ.

Comments

Anonymous said…
ನಾನು ಒ೦ದು ಟಿಪಿಕಲ್ 'mock' ರಿವ್ಯೂ ಬರೆಯೋಣ ಅ೦ತಿದ್ದೆ. ನಿಮ್ಮ ರಿವ್ಯೂ ನೇ ಚೆನ್ನಾಗಿದೆ.
ಪ್ರತಿ ಕನ್ನಡ ಸಿನೆಮಾ ರಿಲೀಸ್ ಆದ ಶುಭ ಘಳಿಗೆಯಲ್ಲಿ ರಿಪೋರ್ಟರ್ ಗಳು ಮಾರುದ್ದ ಮೈಕ್ ಹಿಡಕೊ೦ಡು ಆಟೋ ಡ್ರೈವರ್ ಗಳ ಹಿ೦ದೆ(ಮು೦ದೆ ಆಕ್ಚುವಲಿ) ಅಲೆಯೋದು ನಮ್ಮ ಚಾನೆಲ್ ಗಳ ಸ೦ಪ್ರದಾಯ.
ಇ೦ತ ಸದವಕಾಶ ಬ೦ದೇ ಬರುತ್ತದೆ ಎ೦ಬ ನ೦ಬಿಕೆಯಿ೦ದಲೇ ಚಿತ್ರ ನೋಡುವ ಡ್ರೈವರ್ ಗಳು
"ಸಾರ್.. ಸೂಪರ್ ಸಾರ್", "ಒ೦ದು ಸಾರಿ ನೋಡ್ಬೋದು ಸಾರ್", "ಸಾ೦ಗು, ಲೋಕೇಶನ್, ಫೈಟಿ೦ಗ್ ಮಸ್ತ್ ಸಾರ್", "ಹ೦ಡ್ರೆಡ್ ಡೇಸ್ ಗ್ಯಾರ೦ಟಿ ಸಾರ್" ಇತ್ಯಾದಿ ವೇದ ವಾಕ್ಯಗಳನ್ನು ಮೈಕ್ ಮು೦ದೆ ಉಸಿರುತ್ತಾರೆ.
ಮೀಡಿಯೋಕರ್ ಚಿತ್ರಗಳನ್ನು ಮೀಡಿಯೋಕರ್ ಜನ ರಿವ್ಯೂ ಮಾಡಿದಾಗ ಇದಕ್ಕಿ೦ತ ಜಾಸ್ತಿ ಇನ್ನೇನು ಬಯಸಲು ಸಾಧ್ಯ.

Popular posts from this blog

Limitations Of Human Imagination

I watched the movie "The Abyss" yesterday. Unadulterated hollywood alien-sci-fi garbage. Pseudo-emotions mixed with american-arrogance, so much crap that it would have given Karan Johar some serious inferiority complex. But, this made me think why so many alien stories are so similar. Lets come to the assumptions in the alien movies: 1) Aliens always love to make contact with the humans (If I were an alien, I would try to make contact with crocodiles - much more interesting, right?) 2) Aliens are generally much more intelligent than humans (Its hard to beat the dumbness of humans - probably aliens don't watch Big Boss! Also, since 'they' contact us by reaching 'our' planet, they must be better than us!) 3) Aliens by default understand or learn English (by intercepting the cerebral signals and interpreting with the aural waves and decoding to hexadecimal system - you will be given some such nonsense by the story writers) If you tell the aliens "howdy...

Tell me your mail id and I will tell who you are

You might have known people telling personality traits based on sun signs, moon signs, date of birth, year of birth (oh yes, its a chinese one). I have seen personality tests based on color preferences, answers to particular questions etc. I even had a DOS application which told about your qualities based on the way you built a house! But, I always wondered why people never analyzed based on people's mail ids. Here is an honest attempt at a never-done-before task. Disclaimer : This analysis is obviously prejudiced and has no scientific explanation. Any hurt, sadness or anger caused to anyone is purely accidental and simply unavoidable! If your primary mail is Yahoo... You love stability. You take calculated risks in life. You dont believe in sudden changes, and you think that hard work is the only way to success. You balance your personal life and career very well. The only regret you have is that people dont give enough credit for wha...

Ringtones

Why is it that most people don't keep their mobiles in silent mode, in general and particularly in meetings, movie halls, theaters and concerts? Why is it that people who hate silent mode, don't ever use "Increasing ring" feature? Why do such people use very loud ring tones? Why is it that most people use a very common ring tone and it takes them eternity to pick calls? (Yes, they don't even realize that its their mobile that is ringing!) Why is it that people with the most irritating ring tones are the ones who get calls very regularly? Why is it that most of the ring tones are monotonic? (Don't you think polyphonic ring tones are so less irritating on the ears?) Why is it that people so frequently use the default Nokia monotonic ring tone or a badly played version of Malgudi Days? Why have I never heard a nice polyphonic ring tone of Hotel California or Pulp Fiction theme or something? Why?