I finished reading the delightful "Anartha Kosha" by Na Kasturi . Its a 'one of its kind' book in Kannada. Though it seems to resemble Ambrose Bierce's "Devil's Dictionary", Kasturi adds more flavors to the book - by making puns with existing words, coining new words sounding like existing words, merging two Kannada words to form a new word, merging Kannada word with an English word, twisting the proverbs etc. - to hilarious effect. Go read the full book, till then here is the list of my favorite ones from the book: ಅಕಟಕಟಾ - ನಾವು ಹೀಗೆ ರೋಧಿಸುತ್ತಿದ್ದಾಗ ತಮಿಳರು ಅಯ್ಯೋ ಅನ್ನುತ್ತಿದರು. ಅಚ್ಚಾತುರ್ಯ - ಅಚ್ಚು ಮಾಡುವಾಗಿನ ಚಾತುರ್ಯ, ಬರಹಗಾರರು ಮಾಡುವ ತಪ್ಪುಗಳನ್ನು ಸರಿಪಡಿಸುವ ಜಾಣತನ; ಮೊಳೆ ಜೋಡಿಸುವುದರಿಂದ ಹೊಸ ಭಾಷಾ ಪ್ರಯೋಗಗಳನ್ನು ರಚಿಸುವ ಚಮತ್ಕಾರ. ಅಣುಕಂಪ - ಒಂದು ಊರಲ್ಲಿ ಅಣು ಬಾಂಬು ಸಿಡಿದಾಗ ನೆರೆಯೂರುಗಳಲ್ಲಾಗುವ ಸಂತಾಪ. ಅತಿಯಾಸೆ - ನಮಗಿಂತ ಹೆಚ್ಚು ಲಾಭ ಗಳಿಸಲು ಪ್ರಯತ್ನಪಡುವವರ ದುರ್ಗುಣ. ಅತ್ತೆ - ಈಕೆಗೆ ಮೀಸೆ ಬಂದರೆ, ಚಿಕ್ಕಪ್ಪ ಎಂದು ಕರೆಯಬಹುದು - ಮರೆಯಲ್ಲಿ. ಅನುಕಾರಣ - ಒಂದು ಕಾರಿನ ಹಿಂದೆ ಮತ್ತೊ...
Comments